ಶುಭದ ಹಾರೈಕೆ. ಕಿರಿಯರ ವಿಚಾರದಲ್ಲಿ ಇಷ್ಟವಾದುದನ್ನು ನಡೆಯಲೆಂದು ಹಿರಿಯರು ಹೇಳುವುದು (ವಾತ್ಸಲ್ಯಾದ್ಯತ್ರ ಮಾನೇನ ಕನಿಷ್ಠಸ್ಯಾಭಿಧೀಯತೇ| ಇಷ್ಟಾವಧಾರಕಂ ವಾಕ್ಯಮಾಶೀಃ ಸಾ ಪರಿಕೀರ್ತಿತಾ ||); ಅದು ಸಫಲವಾಗಬಹುದು, ಆಗದಿರಬಹುದು. ಆದ್ದರಿಂದ ವರಕ್ಕಿಂತ ಭಿನ್ನ. ವರ ನಿಶ್ಚಿತವಾಗಿ ಈಡೇರುವ ಹಾರೈಕೆ. ಪ್ರಾಜ್ಞರಾದ ಹಿರಿಯರ ಆಶೀರ್ವಾದವೇ ವರವಾಗುವುದೆಂದು ಹೇಳುವುದುಂಟು.
 
ಸ್ತ್ರೀಯರಿಗೆ ನಾಮಕರಣ ಮಾಡಬೇಕಾದರೆ ಯಶೋದಾದೇವಿ ಮುಂತಾದ ಆಶೀರ್ವಾಚಕ ಶಬ್ದಗಳಿಂದ ಕೂಡಿದ ಹೆಸರು ಉತ್ತಮವೆಂದು ಮನುಸ್ಮೃತಿಯಲ್ಲಿ ಪ್ರತಿಪಾದಿತವಾಗಿದೆ. ನಮಸ್ಕ್ರಿಯಾ ವಸ್ತುನಿರ್ದೇಶಗಳಂತೆ ಕಾವ್ಯದಲ್ಲಿ ಬರುವ ಮಂಗಳಶ್ಲೋಕ ಆಶೀರ್ವಾದ ರೂಪದಲ್ಲಿರಬಹುದು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ